Reiki Growth Coach · ಕಲ್ಪತರು ಸಂಸ್ಥಾಪಕ

ಆರೋಗ್ಯ, ಸಂತೋಷ, ಸಮೃದ್ಧಿ — ರೇಖಿಯ ಮೂಲಕ, ಕನ್ನಡದಲ್ಲಿ.

ನಾನು ಗುರುದತ್ತ ವಿ. ಮರಾಠೆ. 2010 ರಿಂದ ಕನ್ನಡಿಗರಿಗೆ ರೇಖಿ, ಧ್ಯಾನ ಮತ್ತು ವೈಯಕ್ತಿಕ ಬೆಳವಣಿಗೆಯನ್ನು ಸರಳ ಕನ್ನಡದಲ್ಲಿ ಕಲಿಸುತ್ತಿದ್ದೇನೆ. 3,000+ ಜನರ ಕಲ್ಪತರು ಸಮುದಾಯ ಅದರ ಫಲ.

ಗುರುದತ್ತ ವಿ. ಮರಾಠೆ
2010ರಿಂದ ಕಲ್ಪತರು
3,000+ಸದಸ್ಯರು
10 ಲಕ್ಷ+views ಪಡೆದ reels
18+ವರ್ಷ software ವೃತ್ತಿ, ನಂತರ ಪೂರ್ಣಾವಧಿ ಕೋಚ್
ನನ್ನ ಕಥೆ

Software ಇಂಜಿನಿಯರ್‌ನಿಂದ ರೇಖಿ ಕೋಚ್‌ವರೆಗೆ

ಬಾಲ್ಯದಿಂದಲೇ ಆಧ್ಯಾತ್ಮಿಕ ವಿಷಯಗಳ ಕಡೆ ಸೆಳೆತ ಇತ್ತು. ಜೀವನದ ಪ್ರತಿ ಹಂತದಲ್ಲೂ ಸರಿಯಾದ ಮಾರ್ಗದರ್ಶನ ಸಿಗುತ್ತಾ ಬಂದದ್ದು ನನ್ನ ಅದೃಷ್ಟ.

2010 ರಲ್ಲಿ ಔಷಧರಹಿತ ಚಿಕಿತ್ಸೆ (drugless healing) ಬಗ್ಗೆ ಆಳವಾದ ಆಸಕ್ತಿ ಹುಟ್ಟಿತು. ರೇಖಿ ಕಲಿತು, ಅಭ್ಯಾಸ ಮಾಡಿ, ಹಲವರಿಗೆ ಸಹಾಯವಾದದ್ದನ್ನು ಕಂಡಾಗ ಅದನ್ನು ಕಲಿಸಲು ಆರಂಭಿಸಿದೆ. ಅದೇ ಕಲ್ಪತರು.

18 ವರ್ಷಕ್ಕೂ ಹೆಚ್ಚು software ವೃತ್ತಿಯ ನಂತರ ಈಗ ಪೂರ್ಣಾವಧಿ ಕೋಚ್. ನನ್ನ ಗುರಿ ಸರಳ: ಕನ್ನಡದ ಉದ್ಯೋಗಿಗಳು, ಗೃಹಿಣಿಯರು, ಹೀಲರ್‌ಗಳು — ಎಲ್ಲರೂ ಆರೋಗ್ಯಕರ, ಸಂತೋಷದ, ಸಮೃದ್ಧ ಮತ್ತು ಶಾಂತ ಜೀವನ ನಡೆಸುವುದು.

ಕಲ್ಪತರು Charitable Trust ಮತ್ತು Sunada Foundation ಮೂಲಕ ಸಮಾಜ ಸೇವೆಯಲ್ಲೂ ತೊಡಗಿದ್ದೇನೆ.

  • ಕಾರ್ಕಳಬಾಲ್ಯ ಮತ್ತು ಆಧ್ಯಾತ್ಮಿಕ ಬೀಜ
  • 18+ ವರ್ಷSoftware ಉದ್ಯಮದಲ್ಲಿ ವೃತ್ತಿ, ಬೆಂಗಳೂರು
  • 2010ರೇಖಿ ಕಲಿಕೆ, ಕಲ್ಪತರು ಆರಂಭ
  • ಇಂದುUsui, Karuna, Holy Fire ರೇಖಿ ಮಾಸ್ಟರ್ ಟೀಚರ್; ಸ್ವಯಂ ಸಮ್ಮೋಹನ, PLRT; 3,000+ ಸದಸ್ಯರ ಸಮುದಾಯ
ನಾನು ಕಲಿಸುವುದು

ದೇಹ, ಮನಸ್ಸು, ಹಣ — ಮೂರಕ್ಕೂ ಶಕ್ತಿ ಚಿಕಿತ್ಸೆ

ಉಸುಯಿ ರೇಖಿ 1–4

ಸ್ವಯಂ ಚಿಕಿತ್ಸೆಯಿಂದ ಮಾಸ್ಟರ್ ಟೀಚರ್ ಹಂತದವರೆಗೆ, ಹಂತ ಹಂತವಾಗಿ.

ಕರುಣಾ ರೇಖಿ

ಭಾವನಾತ್ಮಕ ಗಾಯಗಳು ಮತ್ತು ಆಳವಾದ ಬ್ಲಾಕ್‌ಗಳಿಗೆ ಮುಂದುವರಿದ ರೇಖಿ.

ಹೋಲಿ ಫೈರ್ ರೇಖಿ

ಧ್ಯಾನ ಆಧಾರಿತ ಶುದ್ಧೀಕರಣ ಮತ್ತು ದೀಕ್ಷೆ.

Money Reiki

ಹಣದ ಬಗೆಗಿನ ನಂಬಿಕೆಗಳನ್ನು ಬದಲಿಸಿ ಸಮೃದ್ಧಿ ಆಕರ್ಷಿಸುವ ವಿಧಾನ.

ಸ್ವಯಂ ಸಮ್ಮೋಹನ

ಸುಪ್ತ ಪ್ರಜ್ಞೆಯ ಜೊತೆ ಕೆಲಸ ಮಾಡಿ ಅಭ್ಯಾಸಗಳನ್ನು ಬದಲಿಸುವುದು.

PLRT · EFT

ಹಿಂದಿನ ಜನ್ಮದ ಪ್ರಭಾವದ ಚಿಕಿತ್ಸೆ ಮತ್ತು ಭಾವನೆಗಳ ಬಿಡುಗಡೆ.

ಔರಾ ಮತ್ತು ಕ್ರಿಸ್ಟಲ್

ಔರಾ ಓದುವಿಕೆ, ಚಕ್ರ ಸಮತೋಲನ, ಕ್ರಿಸ್ಟಲ್ ಥೆರಪಿ.

ಪೂರ್ವಜರ ಚಿಕಿತ್ಸೆ

ವಂಶದಿಂದ ಬಂದ ಮಾದರಿಗಳನ್ನು ಗುರುತಿಸಿ ಬಿಡುಗಡೆ ಮಾಡುವುದು.

ಇವು ಪೂರಕ ಅಭ್ಯಾಸಗಳು; ವೈದ್ಯಕೀಯ ಚಿಕಿತ್ಸೆಗೆ ಬದಲಿ ಅಲ್ಲ.

Blog

ಕನ್ನಡದಲ್ಲಿ ಓದಿ, ಅಭ್ಯಾಸ ಮಾಡಿ

ವೀಡಿಯೊ

ಪ್ರತಿ ವಾರ ಹೊಸ ವೀಡಿಯೊ, ಕನ್ನಡದಲ್ಲಿ

ಕಲ್ಪತರು ಸಾಧನಾ ಮಾಲಿಕೆ

ಬರೆದು ಅಭ್ಯಾಸ ಮಾಡುವ ನಾಲ್ಕು Journals

ಪ್ರತಿದಿನ ಕೆಲವೇ ನಿಮಿಷ ಬರೆಯುವ ಅಭ್ಯಾಸ. ಕನ್ನಡದಲ್ಲಿ, ಕೈಯಲ್ಲಿ ಹಿಡಿಯುವ ಗಾತ್ರದಲ್ಲಿ.

ಕೃತಜ್ಞತಾ ಪಯಣ journal ಮುಖಪುಟಮಾಲಿಕೆ · 1

ಕೃತಜ್ಞತಾ ಪಯಣ

ಸಮೃದ್ಧಿ ಮತ್ತು ಸಂತೋಷಕ್ಕಾಗಿ ದೈನಂದಿನ ಅಭ್ಯಾಸ · 180 ದಿನಗಳು

100 ದಿನಗಳ ಗುರಿ ಪಯಣ journal ಮುಖಪುಟಮಾಲಿಕೆ · 2

100 ದಿನಗಳ ಗುರಿ ಪಯಣ

ಪ್ರತಿ ಬೆಳಿಗ್ಗೆ ಒಂದು ಸಂಕಲ್ಪ, ಪ್ರತಿ ಸಂಜೆ ಒಂದು ಅವಲೋಕನ · 100 ದಿನಗಳು

369 ಮ್ಯಾನಿಫೆಸ್ಟೇಷನ್ ಜರ್ನಲ್ ಮುಖಪುಟಮಾಲಿಕೆ · 3

369 ಮ್ಯಾನಿಫೆಸ್ಟೇಷನ್ ಜರ್ನಲ್

ಸಂಕಲ್ಪ ಬರವಣಿಗೆಯ ದೈನಂದಿನ ಅಭ್ಯಾಸ · 99 ದಿನಗಳು

ಆತ್ಮ ಪಯಣ journal ಮುಖಪುಟಮಾಲಿಕೆ · 4

ಆತ್ಮ ಪಯಣ

ಸೋಲ್ ಜರ್ನಿ ಜರ್ನಲ್ — ಅನುಭವ, ಅರಿವು ಮತ್ತು ಬಿಡುಗಡೆ · 30 ಸೆಷನ್‌ಗಳು

ಸದಸ್ಯರ ಮಾತು

ಅವರೇ ಹೇಳುತ್ತಾರೆ

ಕಲ್ಪತರು ಸಮುದಾಯ ಸೇರಿದ ಮೇಲೆ ನನ್ನ ಜೀವನಶೈಲಿ ಬದಲಾಯಿತು. ಯಾವಾಗಲೂ ಬೇಸರ, ಆತಂಕ, ಸಿಟ್ಟು; ಈಗ ದಿನಚರಿ ಶಿಸ್ತಿನಿಂದ ನಡೆಯುತ್ತಿದೆ. ರೇಖಿ ಅನುಭವ ಅದ್ಭುತ.

— ಸುಧಾ ಜಿ. ಎಂ.

ಒಂದು ತಿಂಗಳಲ್ಲೇ ಒಳಗಿನಿಂದ ಬದಲಾವಣೆ ಕಂಡೆ. ದಿನನಿತ್ಯದ ಅಭ್ಯಾಸದಲ್ಲಿ ಸ್ಥಿರತೆ ಬಂತು. ಇಲ್ಲಿ ಸಿಗುವ ಕಲಿಕೆ ಬೆಲೆ ಕಟ್ಟಲಾಗದ್ದು.

— ಮಧುರಾ ಬಿ. ಜಿ.

ರೇಖಿ ಕಲಿಯುವುದು ನನ್ನ ಕನಸಾಗಿತ್ತು. ರೇಖಿ, law of attraction, ಔರಾ ಶುದ್ಧೀಕರಣ, ಕರುಣಾ ರೇಖಿ — ಜೀವನದ ಎಲ್ಲಾ ಕ್ಷೇತ್ರಗಳಲ್ಲೂ ಲಾಭವಾಗಿದೆ.

ಕಲ್ಪತರು
ಕಲ್ಪತರು

ಕಲಿಯಲು, ಅಭ್ಯಾಸ ಮಾಡಲು, ಬೆಳೆಯಲು ಒಂದು ಸಮುದಾಯ

ಸ್ವಯಂ ಚಿಕಿತ್ಸೆಯಿಂದ ಹೀಲರ್, ಹೀಲರ್‌ನಿಂದ ಟೀಚರ್ — Bronze ನಿಂದ Diamond ವರೆಗೆ ನಿಮ್ಮ ವೇಗದಲ್ಲಿ.

ಸಂಪರ್ಕ

ಮಾತನಾಡೋಣ

ಕಾರ್ಯಕ್ರಮಗಳಲ್ಲಿ ಮಾತನಾಡಲು, ಸಂದರ್ಶನಕ್ಕೆ ಅಥವಾ ಕಲ್ಪತರು ಬಗ್ಗೆ ಪ್ರಶ್ನೆಗೆ WhatsApp ಮಾಡಿ.

+91 96634 33076

💬 WhatsApp